By Gurusiddeshwar M Badiger
ವಿರಹದ ಕಿಡಿಯ ಮಾತು
ಸಣ್ಣ ಗಾಯವನು ಮಾಡಿತು
ಮನದ ಭುವಿಗೆ
ಬಾರದ ಮುಗಿಲಿನ ಮಳೆಯಂತಾಯಿತು
ಸೊಬಗಿನ ನಿನ್ನೆಯ ಸುದಿನ
ಮೋಡದ ಮರೆಯಲಿ ಮೂಡಿತು
ನಗುವ ಮೊಗದ ವದನ
ಬಾಡಿದ ಹೂವಂತಾಯಿತು
ಕಂಗಳ ತವಕದ ಬೇಗುದಿಗೆ
ವೇಗದಿ ಕಂಬನಿಯು ಹಾರಿತು
ನೆನಪುಗಳ ವಿರಹದ ಹಾವಳಿಗೆ
ಮನದ ಮನೆಯೇ ಹಾರಿತು
ನೊಂದ ಪುಟ್ಟ ಹೃದಯ
ಮುನಿಸಿನ ಗೀತೆಯ ಹಾಡಿತು
ಮನದ ದುಗುಡವ ಕೇಳಿ
ಹಸಿರೆಲೆ ಸಾಂತ್ವನ ಹೇಳಿತು
ಹೃದಯ ಸ್ಪರ್ಶವ ಇಣುಕಿ
ಸ್ವಪ್ನ ಕಂಬನಿಯ ಮಿಡಿಯಿತು
ಒಲವಿನ ವಿರಹದ ಕವನ
ಕಡಲ ತೀರದಿ ತೇಲಿತು
By Gurusiddeshwar M Badiger
Comments