By Shilpa Basappa Basarakod
ತುಸುನಕ್ಕು ಓರೆಗಣ್ಣಲಿ ನೀ ಕೊಟ್ಟ ಆ ನೋಟ
ಸೆರೆ ಹಿಡಿಯುತ್ತಿರುವ ಛಾಯಾಗ್ರಾಹಕನಿಗೂ ಹಿಡಿಸಿದೆ ಮಾಟ
ಈ ನೋಟವೆ ಅಲ್ಲವೇ ಅದೆಷ್ಟೋ ಹುಡುಗರ ನಿದ್ದೆಗೆಡಿಸಿ ಕೊಟ್ಟಿದೆ ಮನಸಿಗೆ ಕಾಟ
ಒಂದೆಡೆ ವರನಿಗೂ ಸಂಶಯ ಕಟ್ಟಲಿ ಯಾರಿಗೆಂದು ಮೂರು ಗಂಟ
ನಿನ್ನ ಪರಿಚಯ ಒಂದು ಆಕಸ್ಮಿತ
ನಿನ್ನ ನೋಡಿ ನಾನಾದೆ ಮೂಕವಿಸ್ಮಿತ
ಮಾಡಿಕೊಳ್ಳೋಣವೆಂದರೆ ನಿನ್ನ ನನ್ನ ಖಚಿತ
ಕೊಡ್ತಾನೆ ಇಲ್ಲ ಅಲಾ ನೀ ನಂಗೆ ತುಸು ಸಮಯ ಉಚಿತ
ಮೀನಾಕ್ಷಿಯಂತಹ ಆ ನಿನ್ನ ಕಣ್ಣ
ನೋಡಿ ಮನಸು ಆಡ್ತಿತೆ ಓಕುಳಿ ಬಣ್ಣ
ನಿನ್ನ ಗುಂಗಲಿ ತಿಳಿತಿಲ್ಲ ಯಾವುದೆಂದು ಹಾಲು ಸುಣ್ಣ
ಎಲ್ಲಿ ಮಾಯವಾಗಿರುವೆ ಇಟ್ಟು ನನ್ನ ಮನಸಿಗೆ ಗುಣ್ಣ
By Shilpa Basappa Basarakod
Superb