By Shilpa Basappa Basarakod
ನೀ ಸೋಕಿದ ನನ್ನ ಕೆನ್ನೆಯ ಮೈ
ನೋಡಿ ಪಡ್ಡೆಹುಡುಗರು ಮಾಡುತ್ತಿರುವರು ಹೈ
ಮನಸೋತು ನಾ ಹೇಳಿದೆ ಸೈ
ಮನಗೆದ್ದ ಪೋರ ಕುಣಿದನು ತಕಥೈ
ಹೇ ಚೆಲುವೆ ನೀ ಕಾಯಬೇಕು ಇವತ್ತೊಂದು ಸಂಜೆಯ ಮಸುಕು
ಎತ್ತೊಯ್ಯಲು ಬರುವನು ನಾಳೆ ಮಂಜು ಎಂಬ ಹೊಸ ಬದುಕು
ಕಳೆದರೆ ನಾಳೆಯೊಂದು ನಸುಕು
ತೆರೆಯುವನು ನಿನ್ನವ ನಿನ್ನ ಮೊಗದ ಮುಸುಕು
ನಾ ಪ್ರೀತಿಸಿದ ಹುಡುಗನ ಹೆಸರು ನವೀನ
ಅವನನ್ನು ಕಂಡಾಗಿನಿಂದ ನನ್ನದೆಲ್ಲ ಸುದೀನ
ನನ್ನವ ಇರುವನು ಭಾರೀ ಪ್ರವೀಣ
ಆದರೆ ಪ್ರೀತಿಯಲಿ ಕೊಂಚ ಜಿಪುಣ
By Shilpa Basappa Basarakod
Comments