By Shilpa Basappa Basarakod
ಅರಿತೆನು ನಿನಗಿಲ್ಲವೆಂದು ಒಪ್ಪಿಗೆ
ದುಃಖದಲಿ ನಾ ಕುಳಿತೆ ಸಪ್ಪಗೆ
ನಿನ್ನ ನೆನೆನೆನದು ನಾನಾಗಿರುವೆ ಕಪ್ಪಗೆ
ಕಾಡಿಸುತ್ತಿರುವೆಯೋ ಕಾಯಿಸುತ್ತಿರುವೆಯೋ ಒಪ್ಪಿಕೊಳ್ಳಬಾರದೆ ತೆಪ್ಪಗೆ
ಕಣ್ಣಿಂದ ಮರೆಯಾದರೂ ಮರೆಯಲಾಗದ ನೆನಪು ನಿನ್ನದು
ನೀ ಎಷ್ಟೇ ದೂರ ಸರಿದರೂ ನಿನಗಾಗಿ ಕಾಯುವ ಗಟ್ಟಿತನ ನನ್ನದು
ಪ್ರೀತಿಯ ಬಂಧಾಕೋಣೆಯಲಿ ಹಾಕಿ ನೀಡಲೇ ಮುತ್ತಿನ ಸರಣಿ ಸಜೆ
ಬರುವೆಯಾ ಹೇಳು ನಿನ್ನ ಬೀಜಿ ಕೆಲಸಕ್ಕೆ ಹಾಕಿ ಒಂದೆರಡು ದಿನ ರಜೆ
ಅವನು ನಗ್ತಾ ಇದ್ರೆ ಬೀಳ್ತಾವು ಮೊಗದಲ್ಲಿ ಎರಡು ಕೆನ್ನೆಗುಳಿ
ಆ ನಗು ನೋಡ್ತಾ ಇದ್ರೆ ನನ್ನ ಮೈಯಲ್ಲಿ ಇಟ್ಟಂಗೆ ಆಗುತ್ತೆ ಏನೋ ಕಚಗುಳಿ
ನೆನಪೈತೆ ಇನ್ನೂ ನೀ ಕೊಟ್ಟ ಪ್ರೇಮಕಾಣಿಕೆಯ ಕಾಲ್ಗೆಜ್ಜೆ
ಗೆಜ್ಜೆಯ ನಾದ ನಿಂತರೂ ದೂರ ಸರಿತಿಲ್ಲ ನಿನ್ನ ನೋಡಿದಾಗ ನನಗಾಗುವ ಲಜ್ಜೆ
By Shilpa Basappa Basarakod
wonderful
All the
All the
All the Best
Shilpa basappa