By Shilpa Basappa Basarakod
ನಾ ಹೊದ್ದಿರುವ ಚಾದಾರಿಗೂ ಬೇಕೆನಿಸಿದೆ ನಿನ್ನ ಸ್ಪರ್ಶ
ಬರಬಾರದೇ ನೀ ತುಸು ಬೇಗ ದೂರ ಮಾಡಿ ನಡುವೆ ಏನೇ ಇದ್ದರೂ ಘರ್ಷ
ಯಾಕೋ ಹೃದಯ ನೀನೇ ಬೇಕೆಂದು ಮಾಡುತ್ತಿದೆ ಹಠ
ಒಂದು ಸಾರಿ ಒಪ್ಪಿಗೆ ಕೊಟ್ಟು ನೋಡು ನೋಡಿಕೊಳ್ಳುವೆ ನೀನೆಂದೂ ಸೇರದಂತೆ ಯಾವುದೇ ಮಠ
ಕಿವಿಗಳೆರಡು ನಿಮಿರುವುದು ನೀನಾಡೊ ಪೋಲಿಮಾತಿಗೆ
ನನ್ನ ಕಿವಿಗಳೇಕೋ ಮಂದಾಗಿವೆ ಬೇರೆಯವರಾಡೋ ಗಾಳಿಮಾತಿಗೆ
ನಿನ್ನ ನೋಟವೇಕೊ ಹಿಡಿಸಿದೆ ನನ್ನ ಮನಸಿಗೆ ನಶೆ
ಕೈ ಹಿಡಿದು ನೋಡು ನೋಡ್ಕೋತೀನಿ ನೀನೊಂದು ಹಿಡಿಲಾರ್ದಂಗೆ ಸೀಶೆ
ನೀನೇ ತಾನೇ ಮಾಡಿದ್ದು ನನ್ನ ಮನಸ್ಸಿನ ಹಾವಳಿ
ಯಾವಾಗ ಬರಲಿ ನಿಮ್ಮ ಮನೆಗೆ ಇಬ್ಬರು ಸೇರಿ ಆಚರಿಸಲು ದೀಪಾವಳಿ
By Shilpa Basappa Basarakod
fantastic