By Shilpa Basappa Basarakod
ನೀರಿನ ಮೇಲಿನ ಗುಳ್ಳೆಯ ಹಾಗೆ ಈ ಬದುಕು ಕ್ಷಣಿತ
ಇದ ಅರಿತು ನೀ ಬಾಳೋ ಮನುಜ ಮಾಡುವೆ ಯಾಕಿಷ್ಟು ಕುಣಿತ
ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಜಾಗತಿಕ ತಾಪಮಾನ
ನಿಸರ್ಗಕ್ಕೆ ಮನುಜ ಎಸಗಿದ ಪಾಪಕ್ಕೆ ಉಂಟೆನು ಯಾವುದಾದರು ಅಳತೆಮಾನ
ದರ್ಪದಿ ದ್ರೌಪದಿಯ ಸೀರೆಯನೆಳೆದು ನೀ ತೆಗೆದೆ ಒಂದು ಹೆಣ್ಣಿನ ಗೌರವ
ನಿನ್ನ ದರ್ಪವೇನು ನೀನೇ ಮಣ್ಣಲ್ಲಿ ಮಣ್ಣಾಗಿ ಹೋದೆಯಲ ನೀ ಕೌರವ
ಜೀವನಯುದ್ದಕ್ಕೂ ನನ್ನಪ್ಪ ನನಗೆ ಕಲಿಸಿದ ಪಾಠಗಳ ಸಂಖ್ಯೆ ಅಗಣಿತ
ಹೀಗಿರುವಾಗ ನಾ ಕಲಿಸಿಕೊಡಲಾಗದೇ ನನ್ನಪ್ಪನಿಗೆ ಒಂದೆರಡು ಸಂಖ್ಯೆಗಳ ಗುಣಿತ
ಒಪ್ಪುವೆ ನಾನೇನು ಪ್ರಮಾಣಿಸಿರಲಿಲ್ಲ ಇರುವೆನೆಂದು ನಿನ್ನೊಂದಿಗೆ ಕೊನೆವರೆಗು
ನೀ ಇದ್ದಿದ್ದರೆ ಧಾರೆ ಎರಿಯುತ್ತಿದೆನಲ್ಲಾ ನನ್ನೆಲ್ಲಾ ಪ್ರೀತಿಯ ನಿನಗೆ ನಾ ಇರುವರೆಗು
By Shilpa Basappa Basarakod
nice
Super