By Gurusiddeshwar M Badiger
ಸಹ್ಯಾದ್ರಿ ಸಾಲಿನಂಥ ಜೋಡಿ ಹುಬ್ಬು
ನಾಸ್ತಿಕವಂತು ಸಂಪಿಗೆ ಮೊಗ್ಗು
ಅರೆಬಿರಿದ ತುಟಿಗಳು ಸಕ್ಕರೆ ಪಾಕ
ಕೇಶರಾಶಿಯು ಚಿನ್ನದ ತೂಕ
ಹೂದೋಟದ ಚೆಲುವು ನಿನ್ನದಂತೆ
ಸೌಂದರ್ಯ ಬೆಡಗಿ ನೀನಾಗಿ
ನಡುವ ನರ್ತಿಸಿ ನವಿಲಂತೆ
ನಿನ್ನಂದ ಹೊಗಳಿ ನಾ ಸುಸ್ತಾಗಿ
ಯಾರ ಮನೆಯ ಸೇರಿದೆ
ಕತ್ತಲಲ್ಲೂ ಕಾಡಿದ ಕಣ್ಣಂಚಿನ ಕಾಡಿಗೆ
ನಿನ್ನೊಲವಿನ ವರವು ಬೇಕಾಗಿದೆ
ಕೂತರೂ ತಪ್ಪಿಲ್ಲ ತಪಸ್ಸಿಗೆ
ಕೊಲ್ಲದೆ ಕೊಂದಿರುವೆ ಕನಸಲಿ ಕಾಡಿ
ಯಾರೆಂದು ನೀ ಹೇಳದೆ ಮನವ ಲೂಟಿ ಮಾಡಿ
By Gurusiddeshwar M Badiger
Commentaires