By Shradha K
ಒಂದು ವಟಾರದಲ್ಲಿ ಮಹೇಶ ಮತ್ತು ಸುಮಲತ ಎಂಬ ದಂಪತಿಗಳಿದ್ದರು. ಅವರಿಗೆ ಧೀರಜ್ ಎಂಬ ಮಗ. ಅವನು ಬಾರಿ ಮುಗ್ಧ . ಎಲ್ಲದಲ್ಲೂ ಮುಂದು.
ನಾಲ್ಕನೇ ತರಗತಿಯಲ್ಲಿ ಓದುವಾಗ ತಂದೆ ತಾಯಿಯವರನ್ನು ಕಳೆದುಕೊಂಡವನು. ಅವನ ಎದೆ ಒಡೆದು ಹೋಯಿತು.
ಅವನ ಶಾಲೆಯಲ್ಲಿ ಸುಶೀಲ್ ಎಂಬ ಹುಡುಗ ಅವನು ಬಾಲ್ಯ ಸ್ನೇಹಿತ. ಅವನು ಆಗ ಎಂಟನೇ ತರಗತಿಯಲ್ಲಿ ಓದುತ್ತಿದ್ದನು . ಆಗ ಸುಶೀಲ್ ಮತ್ತು ಅವನ ತಂದೆ ಸದಾನಂದ ಧೀರಜ್ ನನ್ನು ಸಮಾಧಾನ ಮಾಡಿ "ನಮ್ಮ ಜ್ಯೋತಿಗೆ ಬಂದುಬಿಡು ಮಗು. ನೀನು ನಮ್ಮವರು" ಎಂದು ಕರೆದರೂ. ಧೀರಜ್ ಅವರ ಮನೆಗೆ ಸೇರಿದನು.
ಅವರ ಮನೆಯಲ್ಲಿ ಸುಶೀಲ್ ಮತ್ತು ಅವನ ತಂದೆ ಬಿಟ್ಟರೆ ಬೇರೆ ಯಾರಿಗೂ ಧೀರಜ್ ಕಂಡರೆ ಇಷ್ಟವಿರಲಿಲ್ಲ. ಎಲ್ಲರೂ ಅವನನ್ನು ಹೊಡೆಯುತ್ತಿದ್ದರು ಮತ್ತು ನೋಯಿಸುವ ವರು. ಆದರೂ ಧೀರಜ್ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಎಲ್ಲರಿಗೂ ಸಹಾಯ ಮಾಡುತ್ತಿದ್ದನು.
ನಮ್ರತಾ ಸುಶೀಲ್ ಅವನ ತಂಗಿ ಮತ್ತು ಸುಹಾಸ್ ಅವನ ತಮ್ಮ. ಆಗ ನಮ್ರತಾ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಸುಹಾಸ್ ಧೀರಜ್ ಅವನ ಸಹಪಾಠಿ.
ಧೀರಜ್ ಯಾವಾಗಲೂ ಶಾಲೆಯಲ್ಲಿ ಪ್ರಥಮ ಅಂಕ ಪಡೆಯುತ್ತಿದ್ದವು. ಸುಹಾಸ್ ವನಿಗ ಹೊಟ್ಟೆ ಕಿಚ್ಚು. ಮತ್ತೆ ಸುಶೀಲ್ ಅಣ್ಣ ಧೀರಜ್ ಅವನನ್ನು ಪ್ರೀತಿಸುವುದು ನಮ್ರತಾ ಮತ್ತು ಸುಹಾಸ್ ಅವರಿಗೆ ಹೊಟ್ಟೆ ಕಿಚ್ಚು.
ಸುಶೀಲ್ ಅವರ ತಾಯಿ ಲೀಲಾ ಅವರು ಯಾವಾಗಲೂ ಅವಳ ಗಂಡನನ್ನು ಬೈಯ್ದಳು. " ನಿಮಗೆ ಯಾಕೆ ಆ ಹಳ್ಳಿ ಗುಗ್ಗು ಮೇಲೆ ಹುಚ್ಚು ಪ್ರೀತಿ??"
ಆಗ ಸದಾನಂದ ಅವರು ಅವಳನ್ನು"ಏ! ಅವನು ಪಾಪದ ಹುಡುಗ. ಅವನಿಗೆ ತೊಂದರೆ ಮಾಡಬೇಡಿ" ಎಂದು ಬೈಯ್ಯುತ್ತಿದ್ದರು. ಬೇರೆ ಮಕ್ಕಳಿಗೆ ಕೋಪ ಬಂತು. ಆಗ ನಮ್ರತಾ " ನಾನು ನಿನಗೆ ಸ್ವಂತ ತಂಗಿ, ಸುಹಾಸ್ ನಿನಗೆ ಸ್ವಂತ ತಮ್ಮ. ನಮ್ಮೆಲ್ಲರನ್ನು ಬಿಟ್ಟು ಯಾವನೋ ವಟಾರ ಹುಡುಗನಿಗೆ ಪ್ರೀತಿ ತೋರಿಸುತ್ತಿಯ. ಇದು ಅನ್ಯಾಯ." ಎಂದು ಹೇಳಿದಳು. ಆಗ ಸುಶೀಲ್ " ನಾ ನಾನು ನಿಮಗೆಲ್ಲ ಏನು ಕಡಿಮೆ ಮಾಡಿದೆ?? ಯಾರಾದರು ಅವನಿಗೆ ನೋವು ಕೊಟ್ಟರೆ ನಾನು ಸುಮ್ಮನೆ ಇರುವುದಿಲ್ಲ " ಎಂದು ಹೇಳಿದನು.
ಎಲ್ಲರಿಗೂ ಕೋಪ.
ಅವನಿಗೆ ನೋವು ಕೊಡಲು ಪದೇ ಪದೇ ಅವನ ತಂದೆ ತಾಯಿಯ ಬಗ್ಗೆ ಮಾತನಾಡುವವರು. ಆಗ ಧೀರಜ್ ಅಳಲು ಪ್ರಾರಂಭಿಸಿತುತ್ತಿದ್ದನು. ಆಗ ಸುಶೀಲ್ ಮತ್ತು ಅವನ ತಂದೆ ಸದಾನಂದ ಧೀರಜನನ್ನು ಪದೇ ಪದೇ ಸಮಾಧಾನ ಮಾಡುತ್ತಿದ್ದರು.
ಧೀರಜ್ ಅವನನ್ನು ಓದಿಸುವುದು ಲೀಲಾ ಗೆ ಇಷ್ಟವಿರಲಿಲ್ಲ. ಏನಾದರೂ ಮಾಡಿ ಅವನ ವಿಧ್ಯೆ ಹಾಲ್ ಮಾಡಲು ನೋಡಿದಳು. ಆದರೂ ಅವನು ಚೆನ್ನಾಗಿ ಓದಿ ಬಂದನು.
ಸಮಯ ಕಳೆಯಿತು.
ನಮ್ರತಾ ಪಕ್ಕದ ಮನೆ ಹುಡುಗ ಗಿರೀಶ್ ನನ್ನು ಪ್ರೀತಿಸಿ ಮದುವೆಯಾದಳು. ತವರು ಮನೆ ಬಿಟ್ಟು ಗಂಡನ ಮನೆಗೆ ಸೇರಿದಳು. ಗಿರೀಶ್ ಹೆಂಡತಿಯ ಪರ. ಅವನು ಕೂಡ ಧೀರಜ್ ನನ್ನು ದ್ವೇಷಿಸಿದ್ದನು.
ಧೀರಜ್ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿದ.
ಸಮಯ ಕಳೆದ ಹಾಗೆ ನಮ್ರತಾ ಮತ್ತು ಗಿರೀಶ್ ರವರಿಗೆ ಗಂಡು ಮಗು ಹುಟ್ಟಿತು. ಅವನನ್ನು ಅಗಸ್ತ್ಯ ಎಂದು ಹೆಸರಿಸಿದರೂ.
ಸಮಯ ಕಳೆಯಿತು. ಧೀರಜ್ ಮತ್ತು ಅಗಸ್ತ್ಯ ಮಧ್ಯೆ ಬಾಂಧವ್ಯ ಬೆಳೆಯಿತು. ಧೀರಜ್ ಅಗಸ್ತ್ಯ ನನ್ನು ಮುದ್ದಾಡಿಸಿ, ಮಾತನಾಡಿಸಿ ಅವನ ಜ್ಯೋತಿಗೆ ಆಟ ಆಡುತ್ತಿದ್ದರು. ಅಗಸ್ತ್ಯ ಧೀರಜ್ ಅವನನ್ನು ಪ್ರೀತಿಸುವುದು ಅವನ ತಂದೆ ತಾಯಿಗೆ ಕೋಪ. ಅವನು ಧೀರಜ್ ಮಾಮಾ ಎಂದು ಕರೆಯುವಾಗಲೆಲ್ಲ ನಮ್ರತಾ " ಮುಚ್ಚೋ ಬಾಯಿ. ಅವನು ಯಾವ ಸೀಮೆ ಮಾಮಾ??" ಎಂದು ಹೇಳಿ ಮಗನನ್ನು ಬಾರಿಸುತ್ತಿದ್ದಳು.
ಸುಶೀಲ್ ಅಮೂಲ್ಯ ಎಂಬ ಹುಡುಗಿಯ ಜ್ಯೋತಿಗೆ ಮದುವೆಯಾದನು. ಅಮೂಲ್ಯ ಅವಳಿಗೆ ಧೀರಜ್ ಅಂದರೆ ಪ್ರಾಣ. ಮಗನ ಹಾಗೆ ಪ್ರೀತಿ ತೋರಿಸುತ್ತಿದ್ದಳು.
ಸ್ವಾತಿ ಗಿರೀಶ್ ಅವರ ತಂಗಿ. ಅವಳು ಧೀರಜ್ ಅವನ ಮುಗ್ದತೆ ನೋಡಿ ಅವನ್ನು ಇಷ್ಟ ಪಟ್ಟಳು. ಅವನನ್ನು ಮದುವೆಯಾಗಲು ನಿರ್ಧರಿಸಿದಳು. ಇದನ್ನು ಅವಳ ತಂದೆ ತಾಯಿಯವರಿಗೆ ಹೇಳಿದಳು. "ನಾನು ಪಕ್ಕದ ಮನೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ.". ಆಗ ತಂದೆ ತಾಯಿಯವರಿಗೆ ಸಂತೋಷವಾಗಿ ಮಗ ಸೊಸೆಗೆ ಹೇಳಿದರೋ. ಆಗ ನಮ್ರತಾ ಮತ್ತು ಗಿರೀಶ್ ಸುಹಾಸ್ ಅವರನ್ನು ತಯಾರಿಸಿದರು. ಎಲ್ಲರೂ ಖುಷಿ ಪಟ್ಟರು. ಸ್ವಾತಿಯವಳ ತಂದೆ ತಾಯಿ ಅವಳನ್ನು ಅಲಂಕರಿಸಿ ಮದುವೆ ಮಂಟಪಕ್ಕೆ ಕರೆದುಕೊಂಡು ಹೋದರು.
ಸ್ವಾತಿ ಧೀರಜ್ ಬದಲು ಸುಹಾಸ್ ನೋಡಿ ಆಘಾತ ಆದಳು."ಇಲ್ಲ. ನಾನು ಇಷ್ಟು ಪಟ್ಟಿದ್ದು ಧೀರಜ್ ನನ್ನು. ಧೀರಜ್ ಬಹಳ ಮುಗ್ಧೆ. ಅಣ್ಣ ಯಾಕೆ ಹೀಗೆ ಮಾಡಿದೆ??" ಎಂದು ಕಿರುಚಿದಳು. ಆಗ ಗಿರೀಶ್ " ಈ ಗೂಬೆಯನ್ನು ಯಾವಳು ಮದುವೆಯಾಗುತ್ತಾಳೆ??" ಎಂದು ಕಿರುಚಿದನು. ಆಗ ಸ್ವಾತಿಗೆ ಕೋಪ ಬಂತು. " ನೀನು ಆ ಪಾಪದ ಹುಡುಗ ಮೇಲೆ ಹಿಂಗೆಲ್ಲಾ ಮಾತಾಡಿದರೆ ನಾನು ಸುಮ್ಮನೆ ಇರುವುದಿಲ್ಲ. " ಎಂದು ಕಿರುಚಿದಳು. ಗಿರೀಶ್ ನನ್ನು ಅವನ ತಾಯಿ ಚೆನ್ನಾಗಿ ಬಾರಿಸಿದರು. "ಬಾಯಿ ಮುಚ್ಚಿಕೊಂಡು ನಿನ್ನ ತಂಗಿಗೆ ಧೀರಜ್ ಅವರ ಜ್ಯೋತಿಗೆ ಮದುವೆ ಮಾಡ್ಸೋ. ಇಲ್ಲ ಅಂದ್ರೆ ನಾನು ಎಲ್ಲಾದರೂ ಓಡಿ ಹೋಗುತ್ತೇನೆ." ಆಗ ಗಿರೀಶ್ ಇಷ್ಟ ಇಲ್ಲದೆ ಒಪ್ಪಿದನು.
ಸುಶೀಲ್ ಮತ್ತು ಅವನ ತಂದೆ ಧೀರಜ್ ನನ್ನು ಅಲಂಕರಿಸಿ ಮದುವೆ ಚೆನ್ನಾಗಿ ನಡೆಯಿತು.
ಸುಹಾಸ್ಗೆ ಬೇಜಾರಾಯಿತು. ಅದನ್ನು ನೋಡೋಕೆ ಆಗೋದೇ ಲೀಲಾ ಏನಾದರೂ ಮಾಡಲು ನೋಡಿದಳು.
ವರ್ಷಗಳು ಕಳೆದಂತೆ ಸ್ವಾತಿ ಧೀರಜ್ ಮನೆಯಲ್ಲಿ ಚೆನ್ನಾಗಿ ಬಾಳುತ್ತಿದ್ದಳು.
ಅದು ಸುಶೀಲ್ ಮತ್ತು ಅವನ ತಂದೆ ಬಿಟ್ಟರೆ ಬೇರೆ ಯಾರಿಗೂ ಇಷ್ಟವಿರಲಿಲ್ಲ. ಲೀಲಾ ಧೀರಜ್ ನನ್ನು ಕೊಲ್ಲಲು ಪ್ರಯತ್ನ ಪಡುತ್ತಿದ್ದಳು.
ಅವನನ್ನು ಅಪಹರಿಸಲು ಕೆಲವು ವ್ಯಕ್ತಿಗಳನ್ನು ಕರೆದರೂ.
ಆಗ ವ್ಯಕ್ತಿಗಳು ಸುಹಾಸ್ ನನ್ನು ನನ್ನು ಅಪಹರಿಸಿದ್ದರು.
ಸುಹಾಸ್ ಕಾಣೆಯಾದನು. ಎಲ್ಲರಿಗೂ ಸಂಕಟ ಮತ್ತು ನೋವು. ಎಲ್ಲರೂ ಅವನನ್ನು ಹುಡುಕಲು ಪ್ರಯತ್ನಪಟ್ಟರೂ.
ಧೀರಜ್ ಬೆವರು ಸುರಿಸಿ ಸುಹಾಸ್ ನನ್ನು ಹುಡುಕಿ ಹುಡುಕಿ ಕರೆದು ಕೊಂಡು ಬಂದ. ಎಲ್ಲರಿಗೂ ಸಮಾಧಾನವಾಯಿತು. ಎಲ್ಲರೂ ಮನಸು ಕರಗಿತು. ಎಲ್ಲರಿಗೂ ಅವರವರ ಮೇಲೆ ಅಸುಯ ಹುಟ್ಟಿತು. ಎಲ್ಲರೂ ಅವನನ್ನು ಅಪ್ಪಿಕೊಂಡರು. ಹೀಗೆ ಎಲ್ಲರೂ ಸುಖವಾಗಿ ಬಾಳಿದರು.
By Shradha K
Comments