top of page

ಮಲ್ಲಿಗೆ ಹೂವ್ವಿನೊಳಗೊಂದು ಮನೆ

By Gowri Bhat


ಕನಸಿನ ಕಡಲು ಸುತ್ತಲೂ ಮಿಡಿಯುತಿದೆ

ಮನಸಿನ ಗಾಳಿಯು ಆದರದಲಿ ಬೀಸುತಿದೆ

ಈ ಮಣ್ಣಿನ ಕಣಗಳ ಅಂತರದ ಋಣವ

ಕತ್ತಲೆಯಲಿ ಫಳಫಳನೆ  ಹೊಳೆವ ನಕ್ಷತ್ರವ

ಅಂತ ಇಂತ ಚಂದದ ಮಾಯೆ ಯೊಂದ

ಕಂಡೆ ನಾ ಕಂಡೆ ನಾನೊಂದು ಮನೆಯ

ನನ್ನೆದುರಲ್ಲಿ ಸ್ವರ್ಗದ ಲೋಕವೇ ನಿಂತಿಹೂವುದು


ಸಮುದ್ರದಲಿ ಚಿತ್ರೋಮಾಂಚನ ಚಂದ್ರನ ಬಿಂಬವು

ಆ ಚಂದ್ರನ ಪ್ರತಿಬಿಂಬವು ತೇಲುತಿಹುದು

ನೀರಿನ ಸರಣಿಯಲಿ ಚಿನ್ನದ ಚುಕ್ಕಿಗಳಂತೆ

ಬೆಳದಿಂಗಳ ಆ ಚೆಲುವು ಚಿಲಿಪಿಲಿ ಹಕ್ಕಿಗಳ ಹಾಡು

ಕಡಲತೀರವು ಕಪ್ಪೆ ಚಿಪ್ಪಿನಲಿ ಹಿಮದಂತೆ ಮುತ್ತಿದೆಯೇ

ನನ್ನೆದುರಲ್ಲಿ ಸ್ವರ್ಗದ ಲೋಕವೇ ಕಣ್ಮುಂದೆ ನಿಂತಿಹೂವುದು


ಗುಡುಗು ತುಂತುರು ಹನಿಗಳ ಈ ಮಳೆಯು

ಮಲ್ಲಿಗೆ ಹೂವಿನಲಿ ಸೂಸುವ ಆ ಪರಿಮಳವು

ಪ್ರೀತಿ ಬಾಂಧವ್ಯ ಸೌಜನ್ಯದ ಆತಿಥ್ಯವಲಯವು

ವಿಬಿನ್ನ ಆಹಾರ ಅಲಂಕಾರ ವೈವಿದ್ಯವೂ

ಥಳಥಳಿಸಿದೆ ಮೊಗ್ರಾ ನಿಲಯವನು

ಅತ್ತ ಇತ್ತ ಸುತ್ತ ಮುತ್ತ ಕಂಡೆ ನಾ ಸ್ವರ್ಗದ ಲೋಕವ


By Gowri Bhat

0 views0 comments

Recent Posts

See All

Visitor

Not A War

Comentarios

Obtuvo 0 de 5 estrellas.
Aún no hay calificaciones

Agrega una calificación
bottom of page